ಜಿಲ್ಲಾಡಿಳತದ ಬೇಲಿಯೇ ಎದ್ದು ಕಾರವಾರದ ಕಡಲತೀರವನ್ನು ಮೇಯ್ದ ಹಾಗಾಗಿದೆಯೇ?

ಕರ್ನಾಟಕ ರಾಜ್ಯದ ಕೊನೆಯ ಗಡಿಯಾದ ಕೋಣೆ ಕಾಣದೆ ಹೋಯಿತು ನಾಡಿನ ಪ್ರಾಮಾಣಿಕ ನಾಯಕರಿಗೆ. ಆದ್ದರಿಂದ ಯಾರ ಕಣ್ಣಿಗೂ ಕಾಣದೆ ಭ್ರಷ್ಟರಿಗೆ ಮೇಯಲು ವಿಶಾಲವಾದ ಸಾಗರ ಸಿಕ್ಕಿದ ಹಾಗಾಗಿದೆ. ಈ ಸುಂದರ ನಗರದ ಸೌಂದರ್ಯದ ಮುಖ್ಯ ಮೂಗುತಿಯಾದ ಕಡಲದಡವನ್ನು ಮಾನವನ ದುರಾಸೆ ನುಂಗಿ ಹಾಕಿಕೊಳ್ಳುತ್ತ ಕರಗಿಸಿಕೊಳ್ಳುತ್ತಿವೆ ತಿಮಿಂಗಲುಗಳು.ನಾಡಿನ ಸಂವಿಧಾನದ ಪ್ರಯುಕ್ತ ಸ್ಥಾಪಿಸಿ ನಿಯುಕ್ತಿ ಮಾಡಲಾದ ಇಲಾಖಾ ವ್ಯವಸ್ಥೆಗಳೇ ನಿರ್ಲಕ್ಷ ವಹಿಸುತ್ತಾ ಹದಗೆಟ್ಟು ಹೋಗಿದೆ ಇಲ್ಲಿನ ವಾತಾವರಣ.
ಕಾರವಾರದ ನಾಗರಿಕರು ತಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಬಗ್ಗೆ ಜಿಲ್ಲಾಡಳಿತದ ಮೇಲೆ ಎಂದಿಗೂ ವಿಶ್ವಾಸ ಹೊಂದಿರಲಿಲ್ಲ ಎಂದು ಎಲ್ಲರೂ ತಿಳಿದ ವಿಚಾರ. ಹೆಚ್ಚಿನ ಹಣಕಾಸಿನ ಮೌಲ್ಯವನ್ನು ಹೊಂದಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಅಕ್ರಮ ಲಾಭಕ್ಕಾಗಿ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಆದ್ದರಿಂದ ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಪ್ರವಾಸೋಧ್ಯಮದ ಹೆಸರಲ್ಲಿ ಅದರ ನಾಶಕ್ಕಾಗಿ ಕಾದು ಕುಳಿತಿದ್ದಾರೆ. ಈ ಆಭಿವೃದ್ಧಿ ಎನ್ನುವ ಪದವನ್ನು ಸಲೀಸಾಗಿ ಭ್ರಷ್ಟಚಾರಕ್ಕಾಗಿ ಉಪಯೋಗಿಸುವುದು ಈ ದಿನಗಳ ವಾಡಿಕೆ ಆಗಿದೆ. ಇದರಿಂದಾಗಿ ನಮ್ಮ ಬಡ ನಾಗರಿಕರು ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಗಳು/ದೂರುಗಳನ್ನು ಬರೆಯುತ್ತಿರುತ್ತಾರೆ. ಪ್ರಸ್ತುತ ಇದು ಅತ್ಯಂತ ಕೆಟ್ಟ ಮಟ್ಟಕ್ಕೆ ತಲುಪಿದೆ, ಇಲ್ಲಿ ಉಲ್ಲಂಘಿಸುವವರನ್ನು ಜಿಲ್ಲಾಡಳಿತವು ಯಾವ ಕಾರಣಗಳಿಗಾಗಿ ರಕ್ಷಿಸುತ್ತಿದೆ ಎಂದು ತಿಳಿಯದಾಗಿದೆ. ಜಿಲ್ಲಾಡಳಿತವು ಬೀಚ್ ಅನ್ನು ಸಂಪೂರ್ಣವಾಗಿ ನಾಶಪಡಿಸಿ, ಈಗ ಅವರು ನ್ಯಾಯಾಲಯದಲ್ಲಿ ಕಾನೂನುಬಾಹಿರವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸುವುದು ಮುಖ್ಯ. ಇದು ಆಡಳಿತದ ದುರುಪಯೋಗದ ಪರಮಾವಧಿಯಾಗಿದೆ. ಜಿಲ್ಲಾಡಳಿತವು ಕಡಲತೀರವನ್ನು ವ್ಯವಸ್ಥಿತವಾಗಿ ನಾಶಪಡಿಸಿದ ಬಗ್ಗೆ ನಾಗರಿಕರು ದಿನಾಂಕ 9.1.2018, 4.1.2018, 27.12.2018 ಮತ್ತು 20.03.2019 ರಂದು ಸರಕಾರಕ್ಕೆ ಪತ್ರವನ್ನು ಬರೆದಿದ್ದರು. ಅದರಲ್ಲಿ ಅವರು ಕಡಲತೀರ ಮತ್ತು ಕಾಳಿ ನದಿ ದಂಡೆಯ ಸುಮಾರು 15 ಅಕ್ರಮ ನಿರ್ಮಾಣಗಳನ್ನು ಪಟ್ಟಿ ಮಾಡಿದ್ದರು. ನಂತರ ಹಸಿರು ಪೀಠದಲ್ಲಿ ಹೂಡಿದ ವ್ಯಾಜ್ಯ NGT OA 225/2021 ರ ಅಡಿಯಲ್ಲಿ ಐದು ಸದಸ್ಯರ ಸರ್ಕಾರಿ ಸಮಿತಿಯನ್ನು ನೇಮಿಸಲಾಗಿತ್ತು.

ಸಮೀತಿಯವರು 2021 ರಲ್ಲಿ ಇವೆಲ್ಲವನ್ನೂ ಅಕ್ರಮ ನಿರ್ಮಾಣಗಳೆಂದು ಪಟ್ಟಿ ಮಾಡಿದ್ದರು. ಸರಕಾರದ ಪರಿಸರ ಇಲಾಖೆಯವರು ಇದನ್ನು ಒಪ್ಪಿಕೊಂಡು ಸರ್ಕಾರವು ಅಕ್ರಮ ನಿರ್ಮಾಣಗಳನ್ನು ಕೆಡವಲು ಕ್ರಮ ಕೈಗೊಳ್ಳುತ್ತಿದೆ ಎಂದು ದೃಢಪಡಿಸಿದರು. ಕಾನೂನು ಉಲ್ಲಂಘಿಸಿದ್ದವರಿಗೆ 2018 ರಲ್ಲಿ ಮತ್ತು 2023 ರಲ್ಲಿ ಎರಡು ಸಲ ಕಾನೂನು ನೋಟಿಸ್ಗಳನ್ನು ನೀಡಲಾಯಿತು. NGT ಯಲ್ಲಿ ಈ ಎಲ್ಲಾ ವರದಿಗಳು ಮತ್ತು ವಿಚಾರಣೆಯ ಹೊರತಾಗಿಯೂ, ಜಿಲ್ಲಾಧಿಕಾರಿಗಳು ಈ ಅಕ್ರಮ ನಿರ್ಮಾಣಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದು ವಿಷಾದಕರವಾಗಿದೆ, ಇದು ಈ ದೇಶದ ಸ್ಥಾಪಿತ ಕಾನೂನಿನ ಬಾಹೀರ ಆಗಿರುತ್ತದೆ ಇನ್ನೊಂದು ಘೋರ ಅಧಿಕಾರದ ದುರುಪಯೋಗವೆಂದರೆ ತಾತ್ಕಾಲಿಕ ಅನುಮತಿ ನೀಡಿ ಹೋಟೆಲ್ನ ಕಟ್ಟಡವನ್ನು ಘನ ಶಾಶ್ವತ ನಿರ್ಮಾಣ ಕಟ್ಟಲು ಅವಕಾಶ ನೀಡಿರುವುದು ಕೂಡ ಕಾಣುವುದಿಲ್ಲವೇ?. ಈ ಅಕ್ರಮ ಕಟ್ಟಡಗಳಲ್ಲಿ ನಮ್ಮ ಸರ್ಕಾರಿ ಇಲಾಖೆಗಳು ತಮ್ಮ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಿ, ಈ ಅಕ್ರಮ ನಿರ್ಮಾಣಗಳಿಗೆ ಸರಕಾರದ ಖಜಾನೆಯಿಂದ ಆದಾಯವನ್ನು ಒದಗಿಸಿ ಈ ಅಕ್ರಮ ನಿರ್ಮಾಣಗಳಿಗೆ ಪ್ರೋತ್ಸಾಹಿಸುತ್ತಿರುವುದು ಗಮನಿಸಬೇಕಾಗಿದೆ. ಮತ್ತು ಈ ಗುತ್ತಿಗೆಯನ್ನು ನಿರಂತರ ಕೆಲವರಿಗೆ ಮಾತ್ರ ನೀಡುತ್ತಿರುವುದು ಕೂಡ ಭ್ರಷ್ಟಾಚಾರದ ಸಂದೇಹಕ್ಕೆ ಅವಕಾಶ ಮಾಡಿಕೊಡುತ್ತದೆ. ಸಾರ್ವಜನಿಕರ ಕಡಲತೀರದ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡುವುದು ಮತ್ತು ಖಾಸಗಿ ವ್ಯಕ್ತಿಗೆ ಹೆಚ್ಚಿನ ಭೂಮಿ ಅತಿಕ್ರಮಣಕ್ಕೆ ಅವಕಾಶ ನೀಡಿರುವುದು ಭ್ರಷ್ಟಾಚಾರವಾದರೂ ಯಾರ ಗಮನಕ್ಕೆ ಬಂದಿರುವುದಿಲ್ಲ, ಇತ್ತೀಚೆಗೆ, ಕಾಳಿ ನದಿ ದಂಡೆಯಲ್ಲಿರುವ ಮ್ಯಾಂಗ್ರೋವ್ಗಳನ್ನು ಜಿಲ್ಲಾಧಿಕಾರಿ ಕಚೇರಿಯ ಮೂಗಿನ ನೇರ ನಾಶಪಡಿಸಲಾದರೂ ಅಧಿಕಾರಿಗಳು ಮೌನವಹಿಸಿರುವುದು ಭ್ರಷ್ಟಾಚಾರದ ಸಂಶಯ ಹೆಚ್ಚಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕಣ್ಣು ಮುಚ್ಚಿ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ದೇಶಿಸಲಾಗಿದೆ ಎಂದು ಕೇಳಿಬರುತ್ತಿದೆ, ಇದು ಪರಿಸರ ಕಾನೂನಿನ ಗಂಭೀರ ಉಲ್ಲಂಘನೆಯಾಗಿದ್ದು, ಇದು ಕ್ರಿಮಿನಲ್ ಕಾನೂನು ನಿಬಂಧನೆಗಳನ್ನು ಆಕರ್ಷಿಸುತ್ತದೆ.ಸಾವಿರಾರು ಕೋಟಿ ಮೌಲ್ಯದ ಪಿಪಿಪಿ ಮಾದರಿ ಕೇಣಿ ಬಂದರು ಯೋಜನೆಯನ್ನು ಪ್ರಚಾರ ಮತ್ತು ಪಾರದರ್ಶಕ ಟೆಂಡರ್ ಇಲ್ಲದೆ ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಸಹ ಪ್ರಜೆಗಳು ಮಾತನಾಡುತ್ತಿದ್ದಾರೆ. ಇದು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಭ್ರಷ್ಟಾಚಾರವಾಗಿದ್ದರು, ಈ ಅಧಿಕಾರಿಗಳು ಇದನ್ನು ಕಡೆಗಣಿಸಿದ್ದಾರೆ..ಅಧಿಕಾರಿಗಳ ಈ ನಡತೆ ಗೌರವಾನ್ವಿತ ಸುಪ್ರೀಂ ಕೋರ್ಟ್ ರಾಜೇಂದ್ರ ಕುಮಾರ್ ಬರ್ಜಾತ್ಯ vs ಯುಪಿ ಅವಾಸ್ ಏವಂ ವಿಕಾಸ್ ಪರಿಷತ್ ಪ್ರಕರಣದಲ್ಲಿ ನೀಡಿದ ಆದೇಶದ ನೇರ ಉಲ್ಲಂಘನೆಯಾಗಿದೆ. ಆದ್ದರಿಂದ, ಸಾರ್ವಜನಿಕ ಟ್ರಸ್ಟ್ ಸಿದ್ಧಾಂತದ ಅಡಿಯಲ್ಲಿ ಕಾರವಾರದ ಉಳಿದಿರುವ ಏಕೈಕ ಕಡಲತೀರವನ್ನು ಹಾಳು ಮಾಡಿದ್ದಕ್ಕಾಗಿ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಅದನ್ನು ಅದರ ಮೂಲ ಸ್ವರೂಪಕ್ಕೆ ಪುನಃಸ್ಥಾಪಿಸುವ ಅಗತ್ಯವಿದೆ.
ವಿದ್ಯಾಧರ್ ದುರ್ಗೇಕರ್
ಉಪ ಕಮಾಂಡೆಟ/ವಕೀಲರು/ಸಾಹಿತಿ







Save Karwar beach and nature…. Movement started by you is really laudable that too as a local Ex defence person is now yielding results as we all can observe big protest over all these activities as well as Keni port. Pl keep going, protesting as locals and nature lovers are with you Vidhyadhar Durgekar Sir
Here’s a short reply you could use:
“ಶ್ರೀ ವಿದ್ಯಾಧರ ದುರ್ಗೇಕರ್ ಅವರೇ,
ನಿಮ್ಮ ಕಾರವಾರ ನಗರ ಮತ್ತು ಅದರ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಪ್ರೀತಿ ಹಾಗೂ ನಿಸ್ವಾರ್ಥ ಹೋರಾಟವು ಶ್ಲಾಘನೀಯ. ನಿಮ್ಮ ಬದ್ಧತೆ ಮತ್ತು ಕಾಳಜಿ ಕಾರವಾರದ ಭವಿಷ್ಯವನ್ನು ರಕ್ಷಿಸುವ ಮಹತ್ತರ ಸೇವೆಯಾಗಿದೆ. ನಿಮ್ಮ ಅಭಿಮಾನ ಮತ್ತು ಹೋರಾಟಕ್ಕೆ ಹೃತ್ಪೂರ್ವಕ ಅಭಿನಂದನೆಗಳು.”
“ಶ್ರೀ ವಿದ್ಯಾಧರ ದುರ್ಗೇಕರ್ ಅವರೇ,
ನಿಮ್ಮ ಕಾರವಾರ ನಗರ ಮತ್ತು ಅದರ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಪ್ರೀತಿ ಹಾಗೂ ನಿಸ್ವಾರ್ಥ ಹೋರಾಟವು ಶ್ಲಾಘನೀಯ. ನಿಮ್ಮ ಬದ್ಧತೆ ಮತ್ತು ಕಾಳಜಿ ಕಾರವಾರದ ಭವಿಷ್ಯವನ್ನು ರಕ್ಷಿಸುವ ಮಹತ್ತರ ಸೇವೆಯಾಗಿದೆ. ನಿಮ್ಮ ಅಭಿಮಾನ ಮತ್ತು ಹೋರಾಟಕ್ಕೆ ಹೃತ್ಪೂರ್ವಕ ಅಭಿನಂದನೆಗಳು.”